ಕಾಡಾನೆ ದಾಳಿ ತಡೆಗೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು, ಸಾರಗೋಡು ವ್ಯಾಪ್ತಿಯ 80 ಕಿ.ಮೀ.ಪ್ರದೇಶದಲ್ಲಿ ಅರಣ್ಯ ಇಲಾಖೆ ‘ಟೆಂಟಿಕಲ್ ಬೇಲಿ’ ನಿರ್ಮಿಸಲು ಮುಂದಾಗಿದೆ. 18 ಅಡಿ ಎತ್ತರದ ತೂಗು ಮಾದರಿಯಲ್ಲಿರುವ ಈ ವ್ಯವಸ್ಥೆ ಸೌರಶಕ್ತಿ ಆಧಾರಿತವಾಗಿದೆ. ಇದರಲ್ಲಿ 12 ವೊಲ್ಟ್ ವಿದ್ಯುತ್ ಹರಿಸುವುದರಿಂದ ಬೇಲಿ ತಾಕಿದರೆ ಪ್ರಾಣಿಗಳಿಗೆ ಸಣ್ಣದಾಗಿ ವಿದ್ಯುತ್ ಸ್ಪರ್ಶದ ಅನುಭವವಾಗಿ ಕೂಡಲೇ ಅವುಗಳು ಹಿಂದಕ್ಕೆ ಹೋಗುತ್ತವೆ. ವಿದ್ಯುತ್‌ನಿಂದ ಪ್ರಾಣಿಗಳಿಗೆ ಅಪಾಯವಿಲ್ಲ.
short by
vinayak /
05:18 pm on
19 Jun