For the best experience use Mini app app on your smartphone
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಟಣೆ ಪ್ರಕಾರ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿ ಆದಾಗಿನಿಂದ ಈವರೆಗೆ ₹443.80 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ಹಿನ್ನೆಲೆ ಇದುವರೆಗೂ 2172 ಎಫ್‌ಐಆರ್‌ಗಳು ದಾಖಲಾಗಿದ್ದು, 1916 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ (14 ಕ್ಷೇತ್ರಗಳಿಗೆ) ಮತದಾನ ನಡೆಯಲಿದೆ.
short by Prashant badiger / 07:38 am on 28 Apr
ಟಿ.ನರಸೀಪುರ ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸುಮಾರು 35 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಮುಖದ ಮೇಲೆ ಗಾಯಗಳಿದ್ದು, ಮೈ ಮೇಲೆ ಕೆಂಪು ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು ಬಲಗೈ ಮೇಲೆ ದೇವಿ ಎಂಬ ಹೆಸರಿನ ಹಚ್ಚೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
short by Lloyd Dias / 11:44 pm on 27 Apr
ರಂಗಭೂಮಿ ಕಲೆ ಅಳಿಸಿಹೋಗದಂತೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ರಂಗ ನಿರ್ದೇಶಕ ಕೆರೆಹಳ್ಳಿ ದೊರೆಸ್ವಾಮಿ ಹೇಳಿದರು. ಮೈಸೂರಿನಲ್ಲಿ ರಂಗಭೂಮಿ ಮಹತ್ವ, ಹಾಡುಗಾರಿಕೆ ಮತ್ತು ಅಭಿನಯ ವಿಷಯದ ಕುರಿತು ಮಾತನಾಡಿದ ಅವರು, ರಂಗಭೂಮಿ ಎಲ್ಲರನ್ನೂ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೆ ಎಂದರು. ಬದುಕಿನಲ್ಲಿ ಕಲೆ ಅಳವಡಿಸಿಕೊಂಡರೆ ದುಶ್ಚಟಗಳಿಂದ ದೂರ ಇರಬಹುದು ಎಂದು ಅವರು ಹೇಳಿದರು.
short by Lloyd Dias / 03:21 pm on 28 Apr
ಅಪಘಾತದಿಂದಾಗಿ ಮೊಣಕಾಲಿನ ಮೂಳೆಗೆ ಗಂಭೀರ ಗಾಯವಾಗಿ ನಡೆಯಲೂ ಸಾಧ್ಯವಾಗದಂತಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಮೈಸೂರಿನ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ಎನ್.ರವಿ ಹೇಳಿದರು. ಅಧಿಕಾರಿಯ ದೇಹದ ಇತರೆ ಭಾಗದಿಂದ ಅಸ್ಥಿರಜ್ಜುಗಳನ್ನು ತೆಗೆದು ಹಾನಿಗೊಂಡ ಭಾಗಕ್ಕೆ ಅಳವಡಿಸಲಾಗಿದ್ದು, ಇದರಿಂದಾಗಿ ಶಾಶ್ವತವಾದ ಚೇತರಿಕೆ ಸಾಧ್ಯ ಎಂದು ಅವರು ಹೇಳಿದರು.
short by Lloyd Dias / 10:53 pm on 27 Apr
ಬೀಗರ ಊಟ ಮಾಡಿದ್ದ 96 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶಿಂಗ್ರಿಹಳ್ಳಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡವರಲ್ಲಿ 22 ಮಕ್ಕಳಿದ್ದು, ಎಲ್ಲರನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಸಮಾರಂಭದ ಬಳಿಕ‌ ಶನಿವಾರ ಬೀಗರ ಊಟ ಮಾಡಿ ಮಲಗಿದ್ದವರ ಆರೋಗ್ಯದಲ್ಲಿ ತಡರಾತ್ರಿ ಏರುಪೇರಾಗಿದೆ. “ಎಲ್ಲರ ಆರೋಗ್ಯ ಸ್ಥಿರವಾಗಿದೆ” ಎಂದು ಡಿಹೆಚ್ಒ ಡಾ.ಶಂಕರನಾಯ್ಕ ತಿಳಿಸಿದ್ದಾರೆ.
short by Prashant badiger / 03:51 pm on 28 Apr
ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿದ್ದು, ಈವರೆಗೆ 33 ಜನರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಪದ್ಮಿನಿ ಸಾಹೋ ತಿಳಿಸಿದರು. “ಚುನಾವಣಾ ಆಯೋಗದ ಸೂಚನೆಯಂತೆ ಸೋಮವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮರು ಮತದಾನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ” ಎಂದು ಅವರು ಹೇಳಿದರು. ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ ಇಂಡಿಗನತ್ತ ಗ್ರಾಮದ ಜನರು ಮತದಾನ ಬಹಿಷ್ಕರಿಸಿದ್ದರು.
short by Prashant badiger / 07:15 am on 28 Apr
ಕೆ.ಆರ್.ನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (TAPCMS)ದ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಹುಣಸೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಅನಸೂಯರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. “ಸಂಘದ ವಿರುದ್ಧ ಅಸಮರ್ಪಕ ಕಾರ್ಯನಿರ್ವಹಣೆ ಆರೋಪ ಕೇಳಿ ಬಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ 2-3 ತಿಂಗಳಲ್ಲಿ ಸಂಘದಲ್ಲಿನ ಲೋಪದೋಷ ಸರಿಪಡಿಸಿ ನೂತನ ಆಡಳಿತ ಮಂಡಳಿ ರಚಿಸಲಾಗುವುದು” ಎಂದು ಅನಸೂಯ ತಿಳಿಸಿದ್ದಾರೆ.
short by Prashant badiger / 08:35 am on 28 Apr
“ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ತೆರಿಗೆ ಸಂದಾಯ ಅತಿ ಮುಖ್ಯ. ಆದಾಯ ತೆರಿಗೆ ಪಿಡುಗಲ್ಲ, ಅದು ದೇಶದ ಅಭಿವೃದ್ಧಿಗೆ ಪೂರಕ” ಎಂದು ತೆರಿಗೆ ಸಲಹೆಗಾರ ಮತ್ತು ಲೆಕ್ಕ ಪರಿಶೋಧಕ ಎಂ.ಸಿ.ಸುಂದ‌ರ್ ಹೇಳಿದರು. ಮೈಸೂರಿನ ನಟರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ವೊಂದರಲ್ಲಿ ಉಪನ್ಯಾಸ ನೀಡಿದ ಅವರು, “ಪ್ರತಿಯೊಬ್ಬರು ತೆರಿಗೆ ಪಾವತಿಯನ್ನು ಮೂಲಭೂತ ಕರ್ತವ್ಯವೆಂದು ಭಾವಿಸಬೇಕು. ಆಯಾಕಾಲಕ್ಕೆ ಬದಲಾಗುವ ತೆರಿಗೆ ನಿಯಮ ಅರ್ಥೈಸಿಕೊಂದು ಅದರಂತೆ ಪಾವತಿಸಬೇಕು” ಎಂದರು.
short by Prashant badiger / 11:38 am on 28 Apr
ಹುಣಸೂರು ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿರಿಗೆ ಕರಿ ಚಿರತೆಯೊಂದು ಕಾಣಿಸಿಕೊಂಡಿದೆ. ಸುಮಾರು 8 ತಿಂಗಳ ಹಿಂದೆ ಕಾಣಿಸಿಕೊಂಡಿದ್ದ ಈ ಕರಿ ಚಿರತೆ, ಈಗ ಮತ್ತೆ ಪ್ರತ್ಯಕ್ಷವಾಗಿದೆ. ಚಿರತೆಯು ಸ್ವಲ್ಪ ಹೊತ್ತು ಹಸಿರು ಹುಲ್ಲಿನ ಮೇಲೆ ಹೊರಳಾಡಿ, ನಂತರ ಕುಳಿತು ವಿಶ್ರಾಂತಿ ಪಡೆಯುತ್ತಿರು ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
short by Prashant badiger / 12:31 pm on 28 Apr
ಎಲೋನ್ ಮಸ್ಕ್ ಟೆಸ್ಲಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾದ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಚೀನಾದಲ್ಲಿ Full-Self Driving ಸಾಫ್ಟ್‌ವೇರ್ ರೋಲ್ಔಟ್ ಬಗ್ಗೆ ಚರ್ಚಿಸಲು ಮತ್ತು Self Driving ಟೆಕ್‌ಗೆ ತರಬೇತಿ ನೀಡಲು ಸಂಗ್ರಹಿಸಿದ ಡೇಟಾ ವರ್ಗಾವಣೆಯ ಅನುಮೋದನೆಗೆ ಬೀಜಿಂಗ್‌ನಲ್ಲಿ ಹಿರಿಯ ಅಧಿಕಾರಿಗಳ ಭೇಟಿಗೆ ಮಸ್ಕ್ ಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಮಸ್ಕ್ ಭಾರತ ಭೇಟಿ ಮುಂದೂಡಿದ್ದರು.
short by Prashant badiger / 01:54 pm on 28 Apr
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ “ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಈ ಬಗ್ಗೆ ಎಸ್‌ಐಟಿ ತನಿಖೆಗೆ ಈಗಾಗಲೇ ಸರ್ಕಾರ ಆದೇಶಿಸಿದ್ದು, ತನಿಖೆಯಿಂದ ವಾಸ್ತವಾಂಶ ಹೊರಬರಲಿದೆ. ತಪ್ಪು ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ” ಎಂದರು.
short by Prashant badiger / 02:32 pm on 28 Apr
ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳು ಮತದಾರರನ್ನು ಭ್ರಷ್ಟರನ್ನಾಗಿಸುವ ಕ್ರಮ ಎನ್ನಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. “ಗ್ಯಾರಂಟಿಗಳು ಯಾವ ರೀತಿ ಆರ್ಥಿಕತೆಗೆ ಧಕ್ಕೆ ತರಲಿವೆ ಎಂಬುದನ್ನು ಇತರ ಪಕ್ಷಗಳು ಹೇಳಬೇಕು” ಎಂದು ಹೈಕೋರ್ಟ್ ಸೂಚಿಸಿದೆ. ಗ್ಯಾರಂಟಿ ಆಮಿಷವೊಡ್ಡಿ ಶಾಸಕ ಜಮೀರ್ ಅಹಮದ್ ಖಾನ್ ಮತ ಕೋರಿದ್ದು, ಅವರ ಆಯ್ಕೆ ರದ್ದುಪಡಿಸಬೇಕು ಎಂದು ಮತದಾರ ಶಶಾಂಕ್ ಶ್ರೀಧರ್ ಅರ್ಜಿ ಸಲ್ಲಿಸಿದ್ದರು.
short by Prashant badiger / 09:18 am on 28 Apr
ಪೂರ್ಣ ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಭಾನುವಾರ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಕೇಳಿದ್ದು ₹18,171 ಕೋಟಿ ಬರ ಪರಿಹಾರ, ಆದರೆ ಕೇಂದ್ರ ಸರ್ಕಾರ ₹3,454 ಕೋಟಿ ಮಾತ್ರ ಬಿಡುಗಡೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕೇಂದ್ರದ ವಿರುದ್ಧ ಪ್ಲೇಕಾರ್ಡ್ ಪ್ರದರ್ಶಿಸಿ ಧಿಕ್ಕಾರ ಕೂಗಲಾಯಿತು.
short by Prashant badiger / 11:18 am on 28 Apr
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬರುತ್ತಿರುವ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ, ಅವರು ಭಾರತ ತೊರೆದಿದ್ದಾರೆ ಎಂದು ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಭಾರತ ತೊರೆಯುವ ಕುರಿತು ಪೊಲೀಸರಿಗೆ ಸೂಚನೆ ಲಭಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದ್ದು, ಅವರು ಶನಿವಾರ ಬೆಳಗ್ಗೆ ಜರ್ಮನಿಗೆ ತೆರಳಿದ್ದಾರೆಂದು ಹಲವು ವರದಿಗಳು ಹೇಳಿವೆ.
short by Lloyd Dias / 11:31 pm on 27 Apr
ಅಯೋಧ್ಯೆಯ ಬಾಲರಾಮನನ್ನು ತಿರಸ್ಕರಿಸಿದ ಜನರನ್ನು ಕರ್ನಾಟಕದವರು ಎಂದಿಗೂ ಒಪ್ಪಿಕೊಳ್ಳಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಒಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಆಡಳಿತ ಅಪರಾಧಿ ಚಟುವಟಿಕೆ ನಡೆಸುವವರಿಗೆ ವರವಾಗಿದ್ದು, ಬಾಂಬ್ ಸ್ಫೋಟ, ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಹತ್ಯೆ ಇದಕ್ಕೆ ನಿದರ್ಶನ ಎಂದರು.
short by Lloyd Dias / 03:33 pm on 28 Apr
ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಚುನಾವಣೆಯಲ್ಲಿ ಸಿಹಿ-ಕಹಿ ಎರಡೂ ಅನುಭವಾಗಿದೆ. ಕಹಿಯು ಜೀವನದಲ್ಲಿ ಕಲಿಯುವ ಅವಕಾಶ ಮಾಡಿಕೊಟ್ಟರೆ, ಸಿಹಿ ಇನ್ನೂ ಶಕ್ತಿ ತುಂಬಿದೆ” ಎಂದರು. ನಿಮ್ಮ ಮತಗಳ ಮೂಲಕ ನಾನು ಆಯ್ಕೆ ಆದರೆ ನಿಮ್ಮ ಜತೆಯಲ್ಲೇ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.
short by Prashant badiger / 09:40 am on 28 Apr
ಕಾಂಗ್ರೆಸ್​ ಅಧಿಕಾರಕ್ಕೆ ಬಂದಲ್ಲೆಲ್ಲಾ ಸರ್ವನಾಶ ತರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯ ಬೆತ್ತಲೆ ಮೆರವಣಿಗೆ, ಜೈನ ಮುನಿ ಹತ್ಯೆ, ರಾಮೇಶ್ವರಂ ಕೆಫೆ ಸ್ಫೋಟ, ನೇಹಾ ಹಿರೇಮಠ ಕೊಲೆ ಆಯಿತು. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಇಂತಹ ಘಟನೆಗಳು ನಡೆಯುತ್ತಿವೆ” ಎಂದರು. ಕಾಂಗ್ರೆಸ್​ ಜನರನ್ನು ದಿವಾಳಿ ಮಾಡಲು ಹೊರಟಿದೆ ಎಂದು ಮೋದಿ ಹೇಳಿದರು.
short by Prashant badiger / 01:31 pm on 28 Apr
ಹಿಮಾಚಲ ಪ್ರದೇಶದಲ್ಲಿ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಮುಸ್ಲಿಮರಿಗೆ "ನಿಮ್ಮ ಆಸ್ತಿ" ನೀಡುತ್ತದೆ ಎಂದು ಹೇಳಿದ್ದು, ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಠಾಕೂರ್ ಅವರು ಪ್ರಧಾನಿ ಮತ್ತು ಯುಪಿ ಸಿಎಂ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ ಎಂದರು. ಇಸಿಐ ಕ್ರಮ ಕೈಗೊಳ್ಳದಿದ್ದರೆ "ಅಪರಾಧಿಗಳನ್ನು ಹೆಸರಿಸಿ ನಾಚಿಕೆಪಡಿಸಲಾಗುವುದು" ಎಂದು ಅವರು ಹೇಳಿದರು.
short by Lloyd Dias / 04:32 pm on 28 Apr
ಜೆಡಿಎಸ್ ಸಂಸದ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಭಾಗಿಯಾಗಿರುವ ವಿಡಿಯೋಗಳನ್ನು ತಿರುಚಲಾಗಿದೆ ಎಂದು ಪ್ರಜ್ವಲ್ ಹೇಳಿದ್ದಾರೆ. ‘ಮತದಾರರ ಮನಸ್ಸನ್ನು ವಿಷಪೂರಿತಗೊಳಿಸುವಂತೆ’ ವಿಡಿಯೋ ಪ್ರಸಾರ ಮಾಡಲಾಗುತ್ತಿದೆ ಎಂದು ದೂರು ದಾಖಲಿಸಿದ್ದಾರೆ. ಹಗರಣದ ಬಗ್ಗೆ SIT ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
short by Lloyd Dias / 02:17 pm on 28 Apr
ಪ್ರಧಾನಿ ನರೇಂದ್ರ ಮೋದಿಯವರ "ಕಾಂಗ್ರೆಸ್ ಮಂಗಳಸೂತ್ರ ಕದಿಯಲಿದೆ" ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಅವರನ್ನು "ಜ್ಞಾನಿ ದೊಡ್ಡಪ್ಪ" ಎಂದು ಕರೆದಿದ್ದಾರೆ. ಪಿಎಂ ಮೋದಿ ಅಧಿಕಾರದಲ್ಲಿದ್ದರೂ "ಅಸಂಬದ್ಧ" ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು. "ನೀವು ಈ ಜ್ಞಾನಿ ದೊಡ್ಡಪ್ಪ ಮತ್ತು ಅವರ ಅಸಂಬದ್ಧ ಮಾತನ್ನು ನಂಬುತ್ತೀರಾ? ಅವರು ಮಾತನಾಡುವ ಯಾವುದೇ ವಿಷಯವನ್ನು ನಾವು ನಂಬಬಹುದೇ?" ಎಂದು ಅವರು ಪ್ರಶ್ನಿಸಿದರು.
short by Lloyd Dias / 11:38 pm on 27 Apr
“ಹಾಲಿ ಸಂಸದ ಪ್ರತಾಪ್ ಸಿಂಹ 20-25 ದಿನಗಳಿಂದ ಎಲ್ಲೂ ಕಾಣುತ್ತಿಲ್ಲ, ವೋಟ್ ಹಾಕಲು ಬಂದವರು ಎಲ್ಲೋ ಮಿಸ್ ಆಗಿದ್ದಾರೆ. ಬಹುಷಃ ಮುಂದಿನ ಐದು ವರ್ಷ ಕಾಣುವುದಿಲ್ಲವೋ ಏನೋ?” ಎಂದು ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಬಳಿಕ ಅವರ ಬಳಿ ಹೋಗಿ ಹಾರ ಹಾಕಿ, ಸುಳ್ಳನ್ನು ಸತ್ಯದ ರೀತಿ ಹೇಗೆ ಹೇಳಬೇಕೆಂಬ ಬಗ್ಗೆ ಮಾಹಿತಿ ಪಡೆಯುವೆ ಎಂದರು.
short by Prashant badiger / 02:14 pm on 28 Apr
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. “ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ನಾವು ಹೆಣ್ಣುಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ಚುನಾವಣೆ ವೇಳೆ ಎದುರಾಳಿಗಳನ್ನು ಸೋಲಿಸಲು ಎಲ್ಲ ಪ್ರಯತ್ನ ಮಾಡುತ್ತಾರೆ” ಎಂದು ಜಿ.ಟಿ.ದೇವೇಗೌಡ ಹೇಳಿದರು.
short by Lloyd Dias / 04:33 pm on 28 Apr
​​ಭಾರತದ ಚುನಾವಣಾ ಆಯೋಗವು (ಇಸಿಐ) 'ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ' ಪ್ರಚಾರ ಹಾಡಿನ ವಿಷಯವನ್ನು ಮಾರ್ಪಡಿಸುವಂತೆ ಎಎಪಿಗೆ ಸೂಚಿಸಿದ ನಂತರ, ದೆಹಲಿ ಸಚಿವೆ ಅತಿಶಿ, ಚುನಾವಣಾ ಆಯೋಗದ ಕ್ರಮವು ಬಿಜೆಪಿಯ ರಾಜಕೀಯ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣಾ ಆಯೋಗವು ಪ್ರಚಾರದ ಹಾಡನ್ನು ನಿಷೇಧಿಸಿದೆ ಎಂದು ಅವರು ತಿಳಿಸಿದರು.
short by Prashant badiger / 04:38 pm on 28 Apr
ಮೈಸೂರು-ಕೊಡಗು ಲೋಕಸಭೆ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.80.19) ಮತದಾನವಾಗಿದೆ. ನಂತರ ಸ್ಥಾನದಲ್ಲಿ ಹುಣಸೂರು (ಶೇ.77.91), ಮಡಿಕೇರಿ (ಶೇ.75.41), ವಿರಾಜಪೇಟೆ (ಶೇ.73.88), ಚಾಮುಂಡೇಶ್ವರಿ (ಶೇ.73.40) ಕ್ಷೇತ್ರಗಳಿವೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.60.87ರಷ್ಟು ಮತದಾನವಾಗಿದೆ.
short by Prashant badiger / 03:19 pm on 28 Apr
ದಾರಿತಪ್ಪಿಸುವ ಜಾಹೀರಾತಿಗಾಗಿ ಪತಂಜಲಿ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಆಯುಷ್ ಇಲಾಖೆ ಎಲ್ಲ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಔಷಧ ತಯಾರಕರಿಗೆ ಲೇಬಲಿಂಗ್, ಜಾಹೀರಾತು ನಿಯಮ ಪಾಲಿಸಲು ಎಚ್ಚರಿಕೆ ನೀಡಿದೆ. ಈ ಸಂಸ್ಥೆಗಳು ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂಬ ಇಲಾಖೆಯ ಸೂಚನೆ ನ್ಯೂಸ್ 18ಗೆ ದರೆತಿದೆ. 'ಆಯುಷ್ ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟಿದೆ' ಎಂದು ಹೇಳಿಕೊಳ್ಳುವ ಎಲ್ಲ ಔಷಧಿಯನ್ನು ಪರೀಕ್ಷಿಸಲು ಇಲಾಖೆ ರಾಜ್ಯಗಳಿಗೆ ಸೂಚಿಸಿದೆ.
short by Prashant badiger / 12:26 pm on 28 Apr
Load More
For the best experience use inshorts app on your smartphone