For the best experience use Mini app app on your smartphone
ಸಾಲಿಗ್ರಾಮ ತಾಲ್ಲೂಕಿನ ಚನ್ನಂಗೆರೆ ಗ್ರಾಮದಲ್ಲಿ ಶ್ರೀ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಜರುಗಿತು. ಮಧ್ಯಾಹ್ನ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಸಾರ್ವಜನಿಕರು ತೇರು ಎಳೆದಿದ್ದು, ಈ ವೇಳೆ ಭಕ್ತರು ಹಣ್ಣು-ದವನ ಎಸೆದರು. ಹಾಸನ, ಮಂಡ್ಯ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ-ಪಾನಕ ವ್ಯವಸ್ಥೆ ಮಾಡಲಾಗಿತ್ತು.
short by Koushik KS / 07:47 pm on 30 Apr
ಮೈಸೂರಿನ ಗೋಕುಲಂನ ಹಸು-ಕರು ಪಾರ್ಕ್ ಬಳಿಯ ಮನೆಯೊಂದರಲ್ಲಿ ಏಪ್ರಿಲ್ 2ರಂದು ಕಳ್ಳತನ ಮಾಡಿದ್ದ ಕಳ್ಳ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಗೆಳೆಯನ ಸ್ಕೂಟರ್‌ನಲ್ಲಿ ಗೋಕುಲಂನಲ್ಲಿ ಯೋಗೇಶ್ ಎಂಬುವವರ ಮನೆಗೆ ನುಗ್ಗಿದ್ದ ಕಳ್ಳ, 650 ಗ್ರಾಂ ಚಿನ್ನ ಹಾಗೂ ₹2 ಲಕ್ಷ ನಗದನ್ನು ಕದ್ದು ಪರಾರಿಯಾಗಿದ್ದನು. ಈ ಕುರಿತು ಯೋಗೇಶ್ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಬಸವೇಶ್ವರ ನಗರ ಪೊಲೀಸರು 300 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
short by Koushik KS / 07:52 am on 01 May
ಸಂಸದ ಶ್ರೀನಿವಾಸ್ ಪ್ರಸಾದ್ ಸರಳ ಸಜ್ಜನಿಕೆಯ ಸ್ವಾಭಿಮಾನಿ ವ್ಯಕ್ತಿಯಾಗಿದ್ದು, ಅವರ ಆದರ್ಶ ಗುಣಗಳು ಸಮಾಜಕ್ಕೆ ಮಾದರಿ ಎಂದು ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಪ್ರಭಾಕರ್ ಹೇಳಿದರು. ಸಾಲಿಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದಲಿತರ ಧ್ವನಿಯಂತಿದ್ದ ಶ್ರೀನಿವಾಸ್ ಪ್ರಸಾದ್, ಸಜ್ಜನ, ನೇರ, ನಿಷ್ಠುರ ರಾಜಕಾರಣಿಯೂ ಆಗಿದ್ದರು ಎಂದರು. ಈ ವೇಳೆ ದಲಿತ ಮುಖಂಡ ರಾಂಪುರ ಲೋಕೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
short by Prashant badiger / 06:31 pm on 30 Apr
ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡಿದ ವ್ಯಕ್ತಿಯೊಬ್ಬನ ಮದುವೆಯ ಆಮಂತ್ರಣ ಪತ್ರಿಕೆ ಬಗ್ಗೆ ಆತನ ಸಂಬಂಧಿಕರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಪ್ರಕರಣ ದಾಖಲಾಗಿದೆ. "ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆ ಮಾಡುವುದೇ ವಧುವರರಿಗೆ ನೀವು ನೀಡುವ ಉಡುಗೊರೆ" ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. ಮತದಾನದ ದಿನಾಂಕ ಘೋಷಣೆಗೂ ಮುನ್ನ ಕಾರ್ಡ್‌ ಪ್ರಿಂಟ್ ಆಗಿತ್ತು ಎಂದು ವರ ಹೇಳಿದ್ದಾನೆ.
short by Prashant badiger / 05:21 pm on 30 Apr
ಹೆಚ್.ಡಿ.ಕೋಟೆ ತಾಲ್ಲೂಕಿನ ಹೆಬ್ಬಳ್ಳ ಗ್ರಾಮದ ರೈತ ಮಹದೇವ್ ನಾಯಕ್ ಎಂಬಾತನ ಮೇಲೆ ಕಾಡುಹಂದಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹದೇವ್ ಮೇಲೆ ಏಕಾಏಕಿ ಕಾಡುಹಂದಿ ದಾಳಿ ಮಾಡಿದ್ದು, ರಕ್ಷಣೆಗಾಗಿ ಕೂಗಾಟ ನಡೆಸಿದ್ದಾನೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಆತನನ್ನು ರಕ್ಷಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರಣ್ಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನಿಂದ ಮಾಹಿತಿ ಪಡೆದಿದ್ದಾರೆ.
short by Prashant badiger / 07:24 pm on 30 Apr
ಭೂಮಿ ಮೇಲಿನ ದೌರ್ಜನ್ಯ ಮಕ್ಕಳ ಮೇಲಿನ ದೌರ್ಜನ್ಯದಷ್ಟೇ ಪಾಪದ ಕೆಲಸವೆಂದು ಒಡನಾಡಿ ಸಂಸ್ಥೆಯ ಕೆ.ವಿ.ಸ್ಟ್ಯಾನ್ಲಿ ಹೇಳಿದರು. ಹುಣಸೂರಿನಲ್ಲಿ ಆಯೋಜಿಸಿದ್ದ ‘ವಿಶ್ವ ಭೂಮಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂತಾಯಿಯ ದುರುಪಯೋಗದಿಂದ ಭೂಮಿ ಬಂಜೆ ಆಗುವ ಪರಿಸ್ಥಿತಿ ಉಂಟಾಗಿದೆ ಎಂದರು. “ಜಲ ಮೂಲಗಳನ್ನು ಕಲುಷಿತಗೊಳಿಸುವ ಮೂಲಕ ನಮಗೆ ನಾವೇ ವಿಷ ತಿನ್ನುವಂತಹ ಪರಿಸ್ಥಿತಿ ಎದುರಾಗಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಅವರು ಹೇಳಿದರು.
short by Prashant badiger / 09:35 pm on 30 Apr
ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾಗಿರಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಹೇಳಿದರು. ಮೈಸೂರಿನ ಸುತ್ತೂರು ಮಠ ಹಾಗೂ ಜೆಎಸ್ಎಸ್ ವಿದ್ಯಾಪೀಠ ವತಿಯಿಂದ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರವನ್ನು ಉದ್ಘಾಟಿಸಿದ ಅವರು, ಶರಣರು ಕರ್ಮ ಸಿದ್ಧಾಂತವನ್ನು ಕಾಯಕವನ್ನಾಗಿಸಿದವರು, ಅವರ ನಡೆ-ನುಡಿಗಳಲ್ಲಿ ಸಮನ್ವಯತೆ ಇತ್ತು ಎಂದರು. ಜನವಾಣಿಯನ್ನು ದೇವವಾಣಿಯನ್ನಾಗಿಸಿದ್ದು ಶರಣ ಸಂಸ್ಕೃತಿ ಎಂದು ಅವರು ಹೇಳಿದರು.
short by Prashant badiger / 11:27 pm on 30 Apr
ಮೈಸೂರಿನ ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಮಂಗಳವಾರ ಭೌದ್ಧ ಧರ್ಮದ ವಿಧಿ-ವಿಧಾನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ ಅವರ ಪಾರ್ಥೀವ ಶರೀರವನ್ನು ಅಶೋಕಪುರಂ NTM ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಂತ್ಯಕ್ರಿಯೆ ವೇಳೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
short by Prashant badiger / 04:40 pm on 30 Apr
ಹುಣಸೂರಿನಲ್ಲಿ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಹೋಬಳಿಯ ಕೆಳಗನ ಹಳ್ಳಿ ದಡದ ಕೊಪ್ಪಲು ಗ್ರಾಮದ ಬಸವರಾಜ್ ಮೃತ ವ್ಯಕ್ತಿ. ಏಪ್ರಿಲ್ 28ರಂದು ಬಸವರಾಜು ಸಂಬಂಧಿಕರ ಮನೆಯಿಂದ ವಾಪಸಾಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದ್ದು, ಚಾಲಕನು ವಾಹನ ನಿಲ್ಲಿಸದೆ ಪರಾರಿಯಾಗಿದ್ದನು.
short by Koushik KS / 09:43 am on 01 May
ಪಿರಿಯಾಪಟ್ಟಣದ ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಕಾಡು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಳೆ-ಬೆಳೆಗಾಗಿ ವಿಶೇಷ ಪೂಜೆ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮಸ್ಥರು ಸ್ವಾಮಿಯ ಆರಾಧನೆಗೆ ಸಿದ್ಧತೆಗಳನ್ನು ಮಾಡಿಕೊಂಡು ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು. ವಿಶೇಷ ಪೂಜೆ ಹಿನ್ನೆಲೆಯಲ್ಲಿ ಜನರು ಬಸವ ಮೂರ್ತಿಗೆ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು.
short by Koushik KS / 06:13 pm on 30 Apr
ಸಂಸದ ಶ್ರೀನಿವಾಸ್ ಪ್ರಸಾದ್ ನಿಧನದ ಹಿನ್ನೆಲೆ ಸರಗೂರು ಪಟ್ಟಣದಲ್ಲಿ ಮಂಗಳವಾರ ಪ್ರಗತಿಪರ ಸಂಘಟನೆಗಳು ಹಾಗೂ ವರ್ತಕರ ಮಂಡಳಿಯಿಂದ ಅಂಗಡಿಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಲಾಯಿತು. ಈ ವೇಳೆ ಮಾತನಾಡಿದ ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಶಿವಣ್ಣ, “ಬುದ್ಧ, ಬಸವ, ಅಂಬೇಡ್ಕರ್ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದ ಶ್ರೀನಿವಾಸ್ ಪ್ರಸಾದ್, ದೀನ ದಲಿತರಿಗೆ ದಾರಿದೀಪವಾಗಿದ್ದರು ಎಂದರು. ಈ ವೇಳೆ ಶ್ರೀನಿವಾಸ್ ಪ್ರಸಾದ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
short by Prashant badiger / 07:48 pm on 30 Apr
ಮೈಸೂರಿನಲ್ಲಿ ಲೇಖಾ ಎಂಬ ಮಹಿಳೆ ಕಳೆದುಕೊಂಡಿದ್ದ ಐಫೋನ್ ಹಾಗೂ ಪರ್ಸ್‌ ಅನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ. ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮೊಬೈಲ್, ಪರ್ಸ್ ಕಳೆದುಕೊಂಡಿದ್ದ ಲೇಖಾ, ಲಷ್ಕರ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಕಳೆದುಹೋದ ವಸ್ತುಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
short by Prashant badiger / 10:41 pm on 30 Apr
ಅತಿಯಾಗಿ ಮದ್ಯ ಸೇವಿಸಿದ್ದ ಯುವಕನೋರ್ವ ಫುಟ್‌ಪಾತ್‌ ಬಳಿ ಮಲಗಿದ್ದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ನಗರದಲ್ಲಿ ನಡೆದಿದೆ. ಕಸಬಾ ಹೋಬಳಿಯ ರಾಮಪಟ್ಟಣದ ಆದಿತ್ಯ ಮೃತ ಯುವಕ. ಹುಣಸೂರಿನ ರೇಣುಕಾ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿತ್ಯ, ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಅತಿಯಾದ ಮದ್ಯ ಸೇವಿಸಿ ತಾಲ್ಲೂಕು ಪಂಚಾಯತ್ ಕಚೇರಿ ಬಳಿಯ ಫುಟ್‌ಪಾತ್‌‌ ಬಳಿ ಮಲಗಿದ ಬಳಿಕ ಮೃತಪಟ್ಟಿದ್ದಾನೆ.
short by Koushik KS / 10:29 am on 01 May
ಖಾಸಗಿ ಆಸ್ಪತ್ರೆಯೊಂದನ್ನು ನಡೆಸುತ್ತಿರುವ ವೈದ್ಯನ ವಿರುದ್ಧ ಅಕ್ರಮ ಗರ್ಭಪಾತ ಹಗರಣದ ಆರೋಪವಿದ್ದು, ಈ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆ ರದ್ದತಿಗೆ ರವಿಕುಮಾರ್ ಎನ್.ಕೆ ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. 74 ಅಕ್ರಮ ಗರ್ಭಪಾತ ಹಾಗೂ ಕಾಯ್ದೆಯಡಿ ಅಗತ್ಯವಿರುವ ರಿಜಿಸ್ಟರ್‌ಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎನ್ನುವ ಆರೋಪ ಆ ವೈದ್ಯನ ವಿರುದ್ಧ ಇದೆ.
short by Koushik KS / 05:05 pm on 30 Apr
ಪಿರಿಯಾಪಟ್ಟಣ ತಾಲ್ಲೂಕಿನ ಅರಣ್ಯ ಪ್ರದೇಶದೊಳಗೆ ಬೇಟೆಯಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಒಬ್ಬನನ್ನು ಬಂಧಿಸಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯಿಂದ ಒಂದು ಕತ್ತಿ, ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಂಡಿದ್ದಾರೆ.
short by Koushik KS / 06:57 pm on 30 Apr
ಪಿರಿಯಾಪಟ್ಟಣ ತಾಲ್ಲೂಕಿನ ಕಂದಾಯ ಇಲಾಖೆ ಸೇರಿದಂತೆ 90% ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಪಿ.ಜಿ.ಜನಸ್ಪಂದನ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಗೌಡ ಆರೋಪಿಸಿದ್ದಾರೆ. “ಸರ್ಕಾರಿ ಅನುದಾನಗಳು ಸರಿಯಾಗಿ ವಿತರಣೆ ಆಗುತ್ತಿಲ್ಲ, ಸಿಎಂ ಚಾಲನೆ ನೀಡಿದ್ದ 15೦ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈವರೆಗೆ ಪೂರ್ಣಗೊಂಡಿಲ್ಲ” ಎಂದು ಅವರು ತಿಳಿಸಿದರು. ಸರ್ಕಾರಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದು ಪ್ರಶಾಂತ್ ಗೌಡ ಹೇಳಿದ್ದಾರೆ.
short by Prashant badiger / 10:22 pm on 30 Apr
ಮೈಸೂರಿನಲ್ಲಿ ವ್ಯಕ್ತಿಯನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ದುಷ್ಕರ್ಮಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ಏಪ್ರಿಲ್ 28ರಂದು ರಾಜಸ್ಥಾನದಿಂದ ಮೈಸೂರಿಗೆ ರೈಲಿನಲ್ಲಿ ಆಗಮಿಸಿದ್ದ ಚಿರಾಗ್ ಜೈನ್, ರೈಲ್ವೆ ನಿಲ್ದಾಣದಿಂದ ಹೊರಬಂದಾಗ ಸ್ಕೂಟರ್‌ನಲ್ಲಿ ಬಂದ ಮೂವರು ಅವರನ್ನು ಬಲವಂತವಾಗಿ ವಿಜಯನಗರ 4ನೇ ಹಂತಕ್ಕೆ ಕರೆದೊಯ್ದು 38 ಗ್ರಾಂ ಚಿನ್ನದ ಸರ ಹಾಗೂ ಖಾತೆಯಲ್ಲಿದ್ದ ₹58,000 ಮೊತ್ತವನ್ನು ವರ್ಗಾಯಿಸಿಕೊಂಡಿದ್ದರು.
short by Koushik KS / 07:23 pm on 30 Apr
ಬೆಂಗಳೂರು ನಗರವು ಏಪ್ರಿಲ್ ತಿಂಗಳಲ್ಲಿ ಯಾವುದೇ ಮಳೆಯನ್ನು ಕಾಣದ ಹಿನ್ನೆಲೆ 41 ವರ್ಷಗಳಲ್ಲೇ ಅತ್ಯಂತ ಶುಷ್ಕ ಏಪ್ರಿಲ್ ಅನ್ನು ಅನುಭವಿಸಿದ್ದು, ಇದು 1983ರ ನಂತರದ ಮೊದಲ ನಿದರ್ಶನವಾಗಿದೆ. ಪೂರಕವಾಗಿ, ನಗರದ ಐಎಂಡಿ ವೀಕ್ಷಣಾಲಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 36.53 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕನಿಷ್ಠ 55 ವರ್ಷಗಳಲ್ಲೇ ಏಪ್ರಿಲ್‌ನಲ್ಲಿ ದಾಖಲಾದ ಸರಾಸರಿ ಗರಿಷ್ಠ ತಾಪಮಾನ.
short by Koushik KS / 07:07 am on 01 May
“ಕಡಿಮೆ ಸಮಯದಲ್ಲಿ ದುಪ್ಪಟ್ಟು ಲಾಭ ಗಳಿಸಿ” ಎಂಬ ಆಮಿಷವೊಡ್ಡಿ ಹೂಡಿಕೆ ಹೆಸರಿನಲ್ಲಿ ಬೆಂಗಳೂರಿನಲ್ಲಿ ಜನರಿಗೆ ಸುಮಾರು ₹20 ಕೋಟಿ ವಂಚಿಸಿರುವ ಬಗ್ಗೆ 2023ರ ಜನವರಿಯಿಂದ ಏಪ್ರಿಲ್ 30ರವರೆಗಿನ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಇವುಗಳ ಪತ್ತೆಗೆ ಸಿಸಿಬಿಯ ಹೆಚ್ಚುವರಿ ಕಮಿಷನರ್ ಚಂದ್ರಗುಪ್ತ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. “ವಂಚನೆಯ ಹಿಂದೆ ವ್ಯವಸ್ಥಿತ ಜಾಲವಿರುವುದು ಗೊತ್ತಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
short by Koushik KS / 08:33 am on 01 May
ಮಳಿಗೆಗಳ ಬಾಡಿಗೆದಾರರಿಂದ ಶಾಸಕ ಡಿ.ರವಿಶಂಕರ್ ಕೋಟ್ಯಂತರ ರೂ. ಪಡೆದಿದ್ದಾರೆ ಎಂಬ ಆರೋಪ ಸುಳ್ಳು, ಈ ರೀತಿ ಅಪ ಪ್ರಚಾರ ಮಾಡಬೇಡಿ ಎಂದು ಮಾಜಿ ಸಚಿವ ಸಾರಾ ಮಹೇಶ್‌ಗೆ ಮಳೆಗೆಗಳ ಬಾಡಿಗೆದಾರರ ಬಳಗದ ಅಧ್ಯಕ್ಷ ಉಮೇಶ್ ಮನವಿ ಮಾಡಿದರು. ಕೆ.ಆರ್.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂಗಡಿ ನಡೆಸಿ ಜೀವನ ಸಾಗಿಸುವ ನಮ್ಮಲ್ಲಿ ಕೋಟಿಗಟ್ಟಲೆ ಹಣ ಎಲ್ಲಿಂದ ಬರಬೇಕು ಎಂದರು. ಹಾಲಿ ಶಾಸಕರು ಮತ್ತು ಮಾಜಿ ಸಚಿವರು ಒಂದಾಗಿ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
short by Prashant badiger / 08:17 pm on 30 Apr
ಹಿಂದುಳಿದವರಿಗೆ ನ್ಯಾಯ ಒದಗಿಸಲು ಆರಂಭಿಸಿದ್ದ ರಾಯಣ್ಣ ಬ್ರಿಗೇಡ್‌ ಅನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮೇರೆಗೆ ನಿಲ್ಲಿಸಿದೆ, ಆ ಸಂಘಟನೆ ಈಗ ಇದ್ದಿದ್ದರೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತೇನೋ ಎಂದು ಶಿವಮೊಗ್ಗ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. “ಚುನಾವಣೆ ಬಳಿಕ ಹಿಂದುಳಿದವರ, ದಲಿತರ ರಾಜ್ಯ ಮಟ್ಟದ ಸಭೆ ಕರೆಯುತ್ತೇನೆ” ಎನ್ನುವ ಮೂಲಕ ಈಶ್ವರಪ್ಪ ಮತ್ತೆ ರಾಯಣ್ಣ ಬ್ರಿಗೇಡ್‌ ಆರಂಭಿಸುವ ಸುಳಿವು ನೀಡಿದ್ದಾರೆ.
short by Prashant badiger / 07:02 pm on 30 Apr
ಮಾಜಿ ಸಚಿವ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪುತ್ರ ಕಾಂತೇಶ್​ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ದೃಶ್ಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
short by Koushik KS / 07:26 am on 01 May
ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಹಾಜರಾಗುವಂತೆ ಆರೋಪಿಗಳಾದ ಹೆಚ್‌.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ಮಂಗಳವಾರ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. “ಪ್ರಕರಣದಲ್ಲಿ ಆರೋಪಿಗಳ ಹೇಳಿಕೆ ಅಗತ್ಯವಿದೆ. ಹೀಗಾಗಿ ಸಿಆರ್‌ಪಿಸಿ 41 (ಎ) ಅಡಿ ನೋಟಿಸ್‌ ನೀಡಲಾಗಿದೆ” ಎಂದು ಎಸ್‌ಐಟಿ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.
short by Koushik KS / 07:52 pm on 30 Apr
ದೆಹಲಿ ಎನ್‌ಸಿಆರ್‌ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಸಂಸ್ಕೃತಿ ಶಾಲೆ, ಮಯೂರ್ ವಿಹಾರ್‌ನ ಮದರ್ ಮೇರಿ ಶಾಲೆ, ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್ ಮತ್ತು ದ್ವಾರಕಾದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಹುಡುಕಾಟ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಸುಮಾರು 8 ಶಾಲೆಗಳು ಮೇಲ್ ಸ್ವೀಕರಿಸಿವೆ ಎಂದು ದೃಢೀಕರಿಸದ ವರದಿಗಳು ತಿಳಿಸಿವೆ.
short by Koushik KS / 10:00 am on 01 May
127 ವರ್ಷದ ಸಮೂಹವನ್ನು ಗೋದ್ರೆಜ್ ಫ್ಯಾಮಿಲಿ ಸೌಹಾರ್ದಯುತವಾಗಿ 2 ಗುಂಪುಗಳಾಗಿ ವಿಭಜಿಸಲು ನಿರ್ಧರಿಸಿದೆ. ಪ್ರವರ್ತಕ ಆದಿ ಗೋದ್ರೇಜ್, ಸಹೋದರ ನಾದಿರ್ ಲಿಸ್ಟೆಡ್ ಘಟಕ ಇಟ್ಟುಕೊಳ್ಳುತ್ತಾರೆ ಮತ್ತು ಸೋದರಸಂಬಂಧಿ ಜಮ್ಶಿದ್, ಸ್ಮಿತಾ ಅನ್ ಲಿಸ್ಟೆಡ್ ಕಂಪನಿ, ಲ್ಯಾಂಡ್ ಬ್ಯಾಂಕ್ ನಿಯಂತ್ರಿಸುತ್ತಾರೆ. ಆದಿ, ನಾದಿರ್ ಮತ್ತು ನಿಕಟ ಕುಟುಂಬ ಗೋದ್ರೆಜ್ ಇಂಡಸ್ಟ್ರೀಸ್, ಗೋದ್ರೆಜ್ ಗ್ರಾಹಕ ಉತ್ಪನ್ನ, ಗೋದ್ರೆಜ್ ಪ್ರಾಪರ್ಟೀಸ್, ಗೋದ್ರೆಜ್ ಅಗ್ರೋವೆಟ್, ಅಸ್ಟೆಕ್ ಲೈಫ್ ಸೈನ್ಸಸ್ ನಿಯಂತ್ರಿಸುತ್ತಾರೆ.
short by Koushik KS / 08:49 am on 01 May
Load More
For the best experience use inshorts app on your smartphone