For the best experience use Mini app app on your smartphone
ಸನ್ಯಾಸಿಗಳು ಎಂದರೆ ಮನೆ ತೊರೆದು ಆಧ್ಯಾತ್ಮಿಕ ಜಗತ್ತನ್ನು ಪ್ರವೇಶಿಸುವವರು ಎಂಬ ಭಾವನೆ ಇದೆಯಾದರೂ, ಅವರಿಗೆ ಸಮಾಜವೇ ಸಂಸಾರ ಎಂದು ಕಲಾವಿದ ಪ್ರೊ. ಎಸ್.ಮಲ್ಲಣ್ಣ ಹೇಳಿದರು. ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ‘ಶಿವಾನುಭವ ದಾಸೋಹ' ಕಾರ್ಯಕ್ರಮದಲ್ಲಿ ಶಿವಕುಮಾರ ಸ್ವಾಮೀಜಿ ಕುರಿತು ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಸಮಾಜಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಕಾಯಕ ಮತ್ತು ದಾಸೋಹಕ್ಕೆ ಒತ್ತು ನೀಡಿದರು ಎಂದರು.
short by Lloyd Dias / 11:02 pm on 28 Apr
ಬೀಗರ ಊಟ ಮಾಡಿದ್ದ 96 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶಿಂಗ್ರಿಹಳ್ಳಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡವರಲ್ಲಿ 22 ಮಕ್ಕಳಿದ್ದು, ಎಲ್ಲರನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದುವೆ ಸಮಾರಂಭದ ಬಳಿಕ‌ ಶನಿವಾರ ಬೀಗರ ಊಟ ಮಾಡಿ ಮಲಗಿದ್ದವರ ಆರೋಗ್ಯದಲ್ಲಿ ತಡರಾತ್ರಿ ಏರುಪೇರಾಗಿದೆ. “ಎಲ್ಲರ ಆರೋಗ್ಯ ಸ್ಥಿರವಾಗಿದೆ” ಎಂದು ಡಿಹೆಚ್ಒ ಡಾ.ಶಂಕರನಾಯ್ಕ ತಿಳಿಸಿದ್ದಾರೆ.
short by Prashant badiger / 03:51 pm on 28 Apr
ಮೈಸೂರಿನ ಹೂಟಗಳ್ಳಿ ಬಳಿ ಚುನಾವಣಾ ಕರ್ತವ್ಯದಲ್ಲಿದ್ದ ಚೆಸ್ಕಾಂ ಅಧಿಕಾರಿ ವೀರಭದ್ರಪ್ಪ ಎಂಬುವವರಿಗೆ ಭಾನುವಾರ ಕಾರು ಡಿಕ್ಕಿಯಾಗಿ ಅವರ ಕಾಲು ಮುರಿದಿದ್ದು, ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ವೀರಭದ್ರಪ್ಪರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಗ ಶಿವರುದ್ರಸ್ವಾಮಿ ತಿಳಿಸಿದ್ದಾರೆ. ವಿವಿ ಪುರಂ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
short by Lloyd Dias / 08:06 pm on 28 Apr
ಮೈಸೂರಿನ ಹಾರ್ಡ್ವಿಕ್ ಶಾಲೆಯಲ್ಲಿ ರಾಯಲ್ ಕೆನೈನ್ ಕ್ಲಬ್ ವತಿಯಿಂದ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿವಿಧ ತಿಳಿಗಳ ನಾಯಿಗಳು ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ವಾನಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನೆರೆದಿದ್ದ ಶ್ವಾನ ಪ್ರಿಯರ ಗಮನ ಸೆಳೆದವು.
short by Lloyd Dias / 06:02 pm on 28 Apr
ಪಿರಿಯಾಪಟ್ಟಣದ ಬೈಲಕುಪ್ಪೆಯಲ್ಲಿರುವ ತಾಶಿ ಲುಂಪೋ ಮೊನೆಸ್ಟ್ರಿಯಲ್ಲಿ ಟಿಬೇಟಿಯನ್ ಗುರು 11ನೇ ಪಾಂಚೇನ್ ಲಾಮಾ ಅವರ 35ನೇ ಜನ್ಮದಿನವನ್ನು ಆಚರಿಸಲಾಯಿತು. ಈ ವೇಳೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 1,100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕೇಂದ್ರೀಯ ಟಿಬೇಟಿಯನ್ ಆಡಳಿತದ ಆರೋಗ್ಯ ಮಂಡಳಿ ಕಾರ್ಯದರ್ಶಿ ದಾವಾ ಸುಲ್ತಿಮ್ ಸೇರಿದಂತೆ ದೇಶದ ವಿವಿಧೆಡೆಯಿಂದ ಹಲವು ಗಣ್ಯರು ಭಾಗವಹಿಸಿದ್ದರು.
short by Lloyd Dias / 08:42 pm on 28 Apr
ಮೈಸೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 29ರಿಂದ ಮೇ 16ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುವ ಕಾರಣಕ್ಕೆ ಪರೀಕ್ಷಾ ಕೇಂದ್ರಗಳ ಸುತ್ತ ಸೆಕ್ಷನ್ 144 ಜಾರಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ. ಪರೀಕ್ಷೆ ನಡೆಯುವ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಪರೀಕ್ಷೆಗಳು ನಡೆಯುವ ದಿನ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ 144 ಸೆಕ್ಷನ್ ಜಾರಿಯಲ್ಲಿ ಇರುತ್ತದೆ ಎಂದು ಅವರು ತಿಳಿಸಿದರು.
short by Lloyd Dias / 10:17 pm on 28 Apr
ಈ ಬಾರಿ ಹೆಚ್ಚಾದ ತಾಪಮಾನದಿಂದಾಗಿ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಳು ಸಾವಿಗೀಡಾಗುತ್ತಿವೆ ಎಂದು ವರದಿಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮೀನುಗಳು ಸಾಯುತ್ತಿದ್ದು, ಭಾನುವಾರ ಸುಮಾರು 50ಕ್ಕೂ ಹೆಚ್ಚು ಸತ್ತ ಮೀನುಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ. ಈ ಹಿಂದೆ ಕೆರೆ ಕಲುಷಿತಗೊಂಡು ನೂರಾರು ಮೀನುಗಳು ಸತ್ತು ಹೋಗಿರುವ ಘಟನೆಯೂ ಇಲ್ಲಿ ನಡೆದಿತ್ತು.
short by Lloyd Dias / 08:26 pm on 28 Apr
ರಂಗಭೂಮಿ ಕಲೆ ಅಳಿಸಿಹೋಗದಂತೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ರಂಗ ನಿರ್ದೇಶಕ ಕೆರೆಹಳ್ಳಿ ದೊರೆಸ್ವಾಮಿ ಹೇಳಿದರು. ಮೈಸೂರಿನಲ್ಲಿ ರಂಗಭೂಮಿ ಮಹತ್ವ, ಹಾಡುಗಾರಿಕೆ ಮತ್ತು ಅಭಿನಯ ವಿಷಯದ ಕುರಿತು ಮಾತನಾಡಿದ ಅವರು, ರಂಗಭೂಮಿ ಎಲ್ಲರನ್ನೂ ಕರೆಯುತ್ತದೆ, ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡುತ್ತದೆ ಎಂದರು. ಬದುಕಿನಲ್ಲಿ ಕಲೆ ಅಳವಡಿಸಿಕೊಂಡರೆ ದುಶ್ಚಟಗಳಿಂದ ದೂರ ಇರಬಹುದು ಎಂದು ಅವರು ಹೇಳಿದರು.
short by Lloyd Dias / 03:21 pm on 28 Apr
ಟಿ ನರಸೀಪುರ ತಾಲೂಕಿನ ಬನ್ನೂರಿನ ಮಾದೇಗೌಡನ ಹುಂಡಿ ಗ್ರಾಮದಲ್ಲಿ ಸ್ಫೋಟಕ ಸಿಡಿದು ಹಸುವಿನ ಬಾಯಿ ಛಿದ್ರಗೊಂಡ ಘಟನೆ ವರದಿಯಾಗಿದೆ. ಹಸು ಜಮೀನಿನಲ್ಲಿ ಮೇಯುವ ವೇಳೆ ಸ್ಫೋಟಕಕ್ಕೆ ಬಾಯಿ ಹಾಕಿದ್ದು, ಈ ವೇಳೆ ಸ್ಫೋಟಕ ಸಿಡಿದು ಹಸುವಿನ ಬಾಯಿ ಸಂಪೂರ್ಣವಾಗಿ ಛಿದ್ರವಾಗಿದೆ. ಹಸುವಿನ ಮಾಲೀಕ ನಾಗರಾಜು ತನ್ನ ಇನ್ನೊಂದು ಹಸುವನ್ನು ಮನೆಯಲ್ಲಿ ಕಟ್ಟಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ವಿಧಿ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿದ್ದಾರೆ.
short by Lloyd Dias / 10:08 pm on 28 Apr
ನೀರಿನ ಕೊರತೆಯ ನಡುವೆ ಮೈಸೂರಿನ ನಾಲ್ಕನೇ ಕೆರೆಯ ಪುನರುಜ್ಜೀವನಕ್ಕೆ ಭಾರತೀಯ ಜೈನ ಸಂಘಟನೆ ಭಾನುವಾರ ಚಾಲನೆ ನೀಡಿದೆ. ಮೈಸೂರಿನ ಟಿ.ಕಾಟೂರು, ಗೊಲ್ಲನಬೀಡು ಸರಗೂರು ಮತ್ತು ಗುಜ್ಜೆಗೌಡನಪುರದಲ್ಲಿರುವ ಕೆರೆಗಳ ಹೂಳನ್ನು ತೆಗೆದು ಸುತ್ತಮುತ್ತಲಿನ ರೈತರ ಜಮೀನಿಗೆ ಹಾಕಲಾಗುತ್ತಿದ್ದು, ಇಂದು ಪಿಂಜ್ರಾಪೋಲ್‌ನಲ್ಲಿರುವ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈವರೆಗೆ 1,200 ಲೋಡ್ ಹೂಳನ್ನು ಹೊರತೆಗೆಯಲಾಗಿದೆ.
short by Lloyd Dias / 08:18 pm on 28 Apr
ಮೈಸೂರಲ್ಲಿ ನಡೆದ ‘ಕೋಮುವಾದ ವಿರೋಧಿಸಿ ಸಂವಿಧಾನ ಉಳಿಸಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮೈಸೂರಿನ ಮಾಜಿ ಮೇಯರ್ ನಾರಾಯಣ, ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳು ಒಂದಾದರೆ ಮಾತ್ರ ಸಂವಿಧಾನ ಉಳಿಸಲು ಸಾಧ್ಯ ಎಂದರು. “ಷಡ್ಯಂತ್ರಗಳನ್ನು ಹೂಡಿ ಸಂವಿಧಾನದ ಆಶಯಗಳನ್ನು ಮೆಟ್ಟಿ ನಿಲ್ಲುವ ಕೆಲಸವಾಗುತ್ತಿದೆ. ಕೋಮುವಾದಿಗಳಿಂದ ಸಂವಿಧಾನ ರಕ್ಷಿಸಲು ಎಲ್ಲ ಉಪಜಾತಿಗಳು ಒಂದಾಗಬೇಕಿದೆ” ಎಂದು ಅವರು ಹೇಳಿದರು.
short by Lloyd Dias / 09:00 pm on 28 Apr
ಮೈಸೂರು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ (ಎಂಡಿಸಿಎ) ಪರವಾಗಿ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಸೈಕ್ಲಿಸ್ಟ್‌ಗಳು ಸಮಗ್ರ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಐದು ಜನ ಸೈಕ್ಲಿಸ್ಟ್‌ಗಳು ಒಟ್ಟು ಆರು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಮೆನ್ಸ್‌ ಜೂನಿಯರ್ ಕೆಟಗರಿಯಲ್ಲಿ ಕ್ಯಾರೆನ್ ಮಾರ್ಷಲ್ ಅವರು ತಲಾ ಒಂದು ಬೆಳ್ಳಿ ಮತ್ತು ಕಂಚು ಗೆದ್ದು ಗಮನ ಸೆಳೆದರು.
short by Lloyd Dias / 08:50 pm on 28 Apr
ಹಿಮಾಚಲ ಪ್ರದೇಶದಲ್ಲಿ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಮುಸ್ಲಿಮರಿಗೆ "ನಿಮ್ಮ ಆಸ್ತಿ" ನೀಡುತ್ತದೆ ಎಂದು ಹೇಳಿದ್ದು, ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಠಾಕೂರ್ ಅವರು ಪ್ರಧಾನಿ ಮತ್ತು ಯುಪಿ ಸಿಎಂ ಅವರ ಹೆಜ್ಜೆಗಳನ್ನು ಅನುಸರಿಸಿದ್ದಾರೆ ಎಂದರು. ಇಸಿಐ ಕ್ರಮ ಕೈಗೊಳ್ಳದಿದ್ದರೆ "ಅಪರಾಧಿಗಳನ್ನು ಹೆಸರಿಸಿ ನಾಚಿಕೆಪಡಿಸಲಾಗುವುದು" ಎಂದು ಅವರು ಹೇಳಿದರು.
short by Lloyd Dias / 04:32 pm on 28 Apr
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಅವರ ಮೊಮ್ಮಗ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಭಾನುವಾರ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಅಡುಗೆ ಕೆಲಸದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಲೈಂಗಿಕ ಕಿರುಕುಳ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
short by Lloyd Dias / 09:06 pm on 28 Apr
ಮೈಸೂರು-ಕೊಡಗು ಲೋಕಸಭೆ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.80.19) ಮತದಾನವಾಗಿದೆ. ನಂತರ ಸ್ಥಾನದಲ್ಲಿ ಹುಣಸೂರು (ಶೇ.77.91), ಮಡಿಕೇರಿ (ಶೇ.75.41), ವಿರಾಜಪೇಟೆ (ಶೇ.73.88), ಚಾಮುಂಡೇಶ್ವರಿ (ಶೇ.73.40) ಕ್ಷೇತ್ರಗಳಿವೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.60.87ರಷ್ಟು ಮತದಾನವಾಗಿದೆ.
short by Prashant badiger / 03:19 pm on 28 Apr
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. “ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ನಾವು ಹೆಣ್ಣುಮಕ್ಕಳ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ಚುನಾವಣೆ ವೇಳೆ ಎದುರಾಳಿಗಳನ್ನು ಸೋಲಿಸಲು ಎಲ್ಲ ಪ್ರಯತ್ನ ಮಾಡುತ್ತಾರೆ” ಎಂದು ಜಿ.ಟಿ.ದೇವೇಗೌಡ ಹೇಳಿದರು.
short by Lloyd Dias / 04:33 pm on 28 Apr
ಪ್ರಧಾನಿ ನರೇಂದ್ರ ಮೋದಿಯವರ 'ಮಂಗಳಸೂತ್ರ' ಟೀಕೆ ಕುರಿತು ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ನನಗೆ ಇಂದಿರಾ ಅಥವಾ ಸೋನಿಯಾ ಬಳಿ ತ್ಯಾಗ ಮಾಡಲು ಮಂಗಳಸೂತ್ರವಿತ್ತು ಎಂಬುದೇ ಅನುಮಾನ" ಎಂದರು. ಇಟಲಿಯಿಂದ ಬಂದ ಸೋನಿಯಾ ಗಾಂಧಿ ಬಳಿ ಮಂಗಳಸೂತ್ರ ಇತ್ತೋ ಇಲ್ಲವೋ, ಫಿರೋಜ್ ಗಾಂಧಿಯನ್ನು ಮದುವೆಯಾದ ಇಂದಿರಾ ಗಾಂಧಿ ಬಳಿ ಮಂಗಳಸೂತ್ರ ಇತ್ತೋ ಇಲ್ಲವೋ ಎಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.
short by Lloyd Dias / 10:37 pm on 28 Apr
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ “ಉಪ್ಪು ತಿಂದವರು ನೀರು ಕುಡಿಯಲೇಬೇಕು” ಎಂದಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಈ ಬಗ್ಗೆ ಎಸ್‌ಐಟಿ ತನಿಖೆಗೆ ಈಗಾಗಲೇ ಸರ್ಕಾರ ಆದೇಶಿಸಿದ್ದು, ತನಿಖೆಯಿಂದ ವಾಸ್ತವಾಂಶ ಹೊರಬರಲಿದೆ. ತಪ್ಪು ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ” ಎಂದರು.
short by Prashant badiger / 02:32 pm on 28 Apr
​​ಭಾರತದ ಚುನಾವಣಾ ಆಯೋಗವು (ಇಸಿಐ) 'ಜೈಲ್ ಕೆ ಜವಾಬ್ ಮೇ ಹಮ್ ವೋಟ್ ದೇಂಗೆ' ಪ್ರಚಾರ ಹಾಡಿನ ವಿಷಯವನ್ನು ಮಾರ್ಪಡಿಸುವಂತೆ ಎಎಪಿಗೆ ಸೂಚಿಸಿದ ನಂತರ, ದೆಹಲಿ ಸಚಿವೆ ಅತಿಶಿ, ಚುನಾವಣಾ ಆಯೋಗದ ಕ್ರಮವು ಬಿಜೆಪಿಯ ರಾಜಕೀಯ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣಾ ಆಯೋಗವು ಪ್ರಚಾರದ ಹಾಡನ್ನು ನಿಷೇಧಿಸಿದೆ ಎಂದು ಅವರು ತಿಳಿಸಿದರು.
short by Prashant badiger / 04:38 pm on 28 Apr
ಬರಗಾಲದಿಂದಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ರಾಜ್ಯ ಸರ್ಕಾರ ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಬರ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದ್ದು, ಕೇಂದ್ರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದರು. “ತಮಿಳುನಾಡನ್ನು ಓಲೈಸಲು ಕಾವೇರಿ ನೀರು ಬಿಟ್ಟರು. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ” ಎಂದು ಅವರು ಹೇಳಿದರು.
short by Lloyd Dias / 06:13 pm on 28 Apr
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಒಡೆಯರ್ ಅವರ ಗೆಲುವು ನಿಶ್ಚಿತ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಜತೆಯಾಗಿದ್ದು ಮತ್ತಷ್ಟು ಬಲ ಬಂದಂತಾಗಿದೆ ಎಂದರು. “ಎರಡೂ ಪಕ್ಷಗಳು ಒಡೆಯರ್ ಗೆಲುವಿಗೆ ಶ್ರಮಿಸಿದ್ದು ದೊಡ್ಡಮಟ್ಟದ ಗೆಲುವಿಗೆ ಸಹಕಾರಿಯಾಗಲಿದೆ. ಯದುವೀರ್ ಸಾಮಾನ್ಯರಲ್ಲಿ ಒಬ್ಬರಂತೆ ಬೆರೆತಿದ್ದಾರೆ” ಎಂದು ಅವರು ಹೇಳಿದರು.
short by Lloyd Dias / 07:21 pm on 28 Apr
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹಿಂದಿನ ಸಲಕ್ಕಿಂತ ಈ ಬಾರಿ ಮತದಾನ ಮಾಡಲು ತೃತೀಯ ಲಿಂಗಿಗಳು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಕಳೆದ ಬಾರಿ ಕೇವಲ 19 ಜನ ತೃತೀಯ ಲಿಂಗಿ ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದು, ಈ ಬಾರಿ 39 ಜನ ಮತದಾನ ಮಾಡಿದ್ದಾರೆ. ಕೊಡಗಿನ 16 ತೃತೀಯ ಲಿಂಗಿಗಳಲ್ಲಿ ಒಬ್ಬರೂ ಮತಗಟ್ಟೆಗೆ ಆಗಮಿಸದಿದ್ದುದು ಕಂಡು ಬಂದಿರೆ, ನರಸಿಂಹರಾಜ ಕ್ಷೇತ್ರದಲ್ಲಿ 13 ಜನ ಮತದಾನ ಮಾಡಿದ್ದಾರೆ.
short by Lloyd Dias / 11:23 pm on 28 Apr
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದಾಗ ಕಾಂಗ್ರೆಸ್ ‘ಗ್ಯಾಸ್ ಕಾ ಸಿಲಿಂಡರ್ ಫಟಾ ಹೈ’ (ಗ್ಯಾಸ್ ಸಿಲಿಂಡರ್ ಸಿಡಿದಿದೆ) ಎಂದು ಹೇಳಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. "ದೆಹಲಿಯಲ್ಲಿ ಇಂತಹ ಘಟನೆ ನಡೆದಾಗ ಕಾಂಗ್ರೆಸ್ ನಾಯಕರೊಬ್ಬರು ಭಯೋತ್ಪಾದಕನನ್ನು ಏಕೆ ಕೊಂದಿರಿ ಎಂದು ಕಣ್ಣೀರು ಹಾಕುತ್ತಿದ್ದರು" ಎಂದು ಪ್ರಧಾನಿ ಮೋದಿ ಹೇಳಿದರು.
short by Lloyd Dias / 11:10 pm on 28 Apr
ಕೇಂದ್ರದ ಬಿಜೆಪಿ ಸರ್ಕಾರ ಹೊಂದಿರುವ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಮೈತ್ರಿ ಪಕ್ಷ ಸೋಲಿಸಿ, ರೈತರನ್ನು ಉಳಿಸಿ ಅಭಿಯಾನವನ್ನು ಉತ್ತರ ಕರ್ನಾಟಕದಲ್ಲಿಯೂ ಮುಂದುವರೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ನಮ್ಮ ಅಭಿಯಾನದ ಕಾರಣ ಮೊದಲ ಹಂತದಲ್ಲಿ ಶೇ. 4ರಷ್ಟು ರೈತರ ಮತಗಳು ಮೈತ್ರಿ ಅಭ್ಯರ್ಥಿಗಳ ವಿರುದ್ಧ ಬಿದ್ದಿವೆ ಎಂದರು.
short by Lloyd Dias / 06:41 pm on 28 Apr
ಅಯೋಧ್ಯೆಯ ಬಾಲರಾಮನನ್ನು ತಿರಸ್ಕರಿಸಿದ ಜನರನ್ನು ಕರ್ನಾಟಕದವರು ಎಂದಿಗೂ ಒಪ್ಪಿಕೊಳ್ಳಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಒಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ ಆಡಳಿತ ಅಪರಾಧಿ ಚಟುವಟಿಕೆ ನಡೆಸುವವರಿಗೆ ವರವಾಗಿದ್ದು, ಬಾಂಬ್ ಸ್ಫೋಟ, ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯ ಹತ್ಯೆ ಇದಕ್ಕೆ ನಿದರ್ಶನ ಎಂದರು.
short by Lloyd Dias / 03:33 pm on 28 Apr
Load More
For the best experience use inshorts app on your smartphone